ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಮಹಿಳಾ ಯಕ್ಷಗಾನದಲ್ಲಿ ಬೆಂಗಳೂರು ಪ್ರಥಮ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜನವರಿ 14 , 2014
ಜನವರಿ 14, 2014

ಮಹಿಳಾ ಯಕ್ಷಗಾನದಲ್ಲಿ ಬೆಂಗಳೂರು ಪ್ರಥಮ

ಕುಮಟಾ : ಪಟ್ಟಣದ ಹವ್ಯಕ ಸಭಾಭವನದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಮಹಿಳಾ ಯಕ್ಷಗಾನ ಸಂಭ್ರಮದ ಪ್ರಥಮ ಬಹುಮಾನವನ್ನು ಚಕ್ರವ್ಯೂಹ ಯಕ್ಷಗಾನ ಪ್ರದರ್ಶಿಸಿದ ಬೆಂಗಳೂರಿನ ಯಕ್ಷಕಲಾ ಅಕಾಡೆಮಿ ತಂಡ ಹಾಗೂ 'ಸುಧನ್ವಾರ್ಜುನ' ಯಕ್ಷಗಾನ ಪ್ರದರ್ಶಿಸಿದ ಬೆಂಗಳೂರಿನ ಸಿರಿಕಲಾಮೇಳ ಹಂಚಿಕೊಂಡಿತು.

ದ್ವಿತೀಯ ಬಹುಮಾನವನ್ನು 'ಮಾಗಧ ವಧೆ' ಪ್ರದರ್ಶಿಸಿದ ಬೆಂಗಳೂರಿನ ಯಕ್ಷಸಿರಿ ತಂಡ ಹಾಗೂ 'ಜ್ವಾಲಾ ಪ್ರತಾಪ' ಯಕ್ಷಗಾನ ಪ್ರದರ್ಶಿಸಿದ ಶಿವಮೊಗ್ಗದ ಶ್ರೀ ಮಾತಾ ಮಹಿಳಾ ಯಕ್ಷ ಕಲಾ ಟ್ರಸ್ಟ್‌ ಹಂಚಿಕೊಂಡವು.

ತೃತೀಯ ಬಹುಮಾನವನ್ನು 'ಭಿಷೊ¾àತ್ಪತ್ತಿ' ಯಕ್ಷಗಾನ ಪ್ರದರ್ಶಿಸಿದ ಸಾಗರದ ಶ್ರೀ ಮಾಹಾಮ್ಮಾಯಾ ಮಹಿಳಾ ಯಕ್ಷಗಾನ ಮಂಡಳಿ ಟ್ರಸ್ಟ್‌ ಹಾಗೂ 'ಗಧಾಪರ್ವ' ಯಕ್ಷಗಾನ ಪ್ರದರ್ಶಿಸಿದ ಶಿರಸಿಯ ಭೈರುಂಬೆ, ಗಡಿಹೊಳೆಯ ಶ್ರೀ ವಿದ್ಯಾ ಸಂಸ್ಕೃತಿ ಸಂಘ ಹಂಚಿಕೊಂಡಿತು.

ಯಕ್ಷಗಾನ ಸಂಶೋಧನಾ ಕೇಂದ್ರದ ವತಿಯಿಂದ 'ಸುದರ್ಶನ ಗರ್ವಭಂಗ' ಯಕ್ಷಗಾನ ಪ್ರದರ್ಶಿಸಿದ್ದ ಚಿಕ್ಕಮಗಳೂರಿನ, ಹನುಮಳ್ಳಿಯ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ವಿಶೇಷ ಬಹುಮಾನ ನೀಡಲಾಯಿತು.

ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ| ಜಿ.ಜಿ. ಸಭಾಹಿತ, ಶಾಸಕಿ ಶಾರದಾ ಮೋಹನ ಶೆಟ್ಟಿ ಬಹುಮಾನ ಹಾಗೂ ಪ್ರಶಸ್ತಿ ವಿತರಿಸಿದರು.

ಸ್ಪರ್ಧೆ ನಿರ್ಣಾಯಕರಾಗಿದ್ದ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗಪ್ಪ, ಮಮತಾ ಜಿ. ಹಾಗೂ ದಿವಾಕರ ಹೆಗಡೆ, ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಜಿ.ಎಲ್‌. ಹೆಗಡೆ ವೇದಿಕೆಯಲ್ಲಿದ್ದರು.

ಕೃಪೆ : http://kannada.yahoo.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ